ಬ್ರೇಕ್ ಬದಲು ಎಕ್ಸಿಲೇಟರ್ ಒತ್ತಿದ ಡಾಕ್ಟರ್; ಎದುರಿಗೆ ಬಂದ ಬೈಕ್ ಸವಾರನಿಗೆ ಕಾರು ಡಿಕ್ಕಿ | Kamakshipalya

2022-05-23 2

ಬೆಂಗಳೂರಿನ ಕಾಮಾಕ್ಷಿಪಾಳ್ಯದ ಸಂಚಾರಿ ಠಾಣಾ ವ್ಯಾಪ್ತಿಯ ದೀಪಾ ಕಾಂಪ್ಲೆಕ್ಸ್ (ಅಂಬೇಡ್ಕರ್ ಕಾಲೇಜ್-ಮಲ್ಲತ್ತಹಳ್ಳಿ ರಸ್ತೆ ಬಳಿ) ಲೇಡಿ ಡೆಂಟಿಸ್ಟ್ ಡಾ. ಲಕ್ಷ್ಮಿ ಅನ್ನೋವ್ರು ಅಪಘಾತ ಮಾಡಿದ್ದಾರೆ. ಹೊಸ ಕಾರ್ ಖರೀದಿಸಿ ರೋಡ್‍ಗಿಳಿದ ಮೇಡಂ, ಎದುರಿಗೆ ಬಂದ ಬೈಕ್ ಸವಾರನಿಗೆ ಡಿಕ್ಕಿ ಹೊಡೆದು, ಮೇಲೇ ಕಾರ್ ಹತ್ತಿಸಿಬಿಟ್ಟಿದ್ದಾರೆ. ಕಾರ್ ಬ್ರೇಕ್ ಹಾಕೋ ಬದಲಿಗೆ ಎಕ್ಸಿಲೇಟರ್ ಒತ್ತಿಬಿಟ್ಟಿದ್ದಾರೆ. ಅಪಘಾತ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಡಿ... ಟರ್ನ್ ಮಾಡಿಕೊಳ್ಳೋ ಮೇಡಂ ಹೇಗೆ ಜೋರಾಗಿ ಓಡಿಸಿದ್ದಾರೆ. ರಿಜಿಸ್ಟ್ರಾರ್ ಕಚೇರಿಯಲ್ಲಿ ಡಾಕ್ಯೂಮೆಂಟರ್ ರೈಟರ್ ಆಗಿರೋ ಬೈಕ್ ಸವಾರ ಪ್ರಭು ಅನ್ನೋವ್ರನ್ನ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಡಿಕ್ಕಿ ಹೊಡೆದ ಡಾ.ಲಕ್ಷ್ಮಿ ವಿರುದ್ಧ ಕಾಮಾಕ್ಷಿಪಾಳ್ಯ ಸಂಚಾರಿ ಠಾಣೆಯಲ್ಲಿ ದೂರು ಕೊಟ್ಟು 2 ದಿನವಾದರೂ ಇನ್ನೂ ಎಪ್‍ಐಆರ್ ದಾಖಲಾಗಿಲ್ಲ. ಇವತ್ತು ಬೆಳಗ್ಗೆ ವಶಕ್ಕೆ ಪಡೆದಿದ್ದಾರೆ.

#PublicTV #Kamakshipalya